ಪೀಠಿಕೆ :ಪ್ರತಿವರ್ಷ ಏಪ್ರಿಲ್ 2 ರಂದು ಆಚರಿಸಲಾಗುವ “ಕರ್ನಾಟಕ ಪೊಲೀಸ್ ಧ್ವಜ ದಿನ“ವು ಕೇವಲ ಇತಿಹಾಸದ ನೆನಪಲ್ಲ, ಇದು ಪೊಲೀಸ್ ಇಲಾಖೆಯ ದಕ್ಷತೆ ಮತ್ತು ಸಾರ್ವಜನಿಕ ಸೇವೆಯ ಬದ್ಧತೆಯ ಸಂಕೇತವಾಗಿದೆ.ಏಪ್ರಿಲ್ 2 ರ 1963 ರಲ್ಲಿ ಜಾರಿಗೆ ಬಂದ ಪೊಲೀಸ್ ಕಾಯ್ದೆಯ ಸವಿನೆನಪಿಗಾಗಿ ಆಚರಿಸಲಾಗುವ “ಪೊಲೀಸ್ ಧ್ವಜ ದಿನ“ವು ಇಂದು ಡಿಜಿಟಲ್ ಯುಗದ ಸವಾಲುಗಳನ್ನು ಎದುರಿಸಲು ಪೊಲೀಸರು ಸಜ್ಜಾಗಿರುವ ರೀತಿಗೆ ಸಾಕ್ಷಿಯಾಗಿದೆ.

1.ಧ್ವಜ ದಿನ ಮತ್ತು ಪೊಲೀಸ್ ಕಲ್ಯಾಣ :ಈ ದಿನದಂದು ಸಾರ್ವಜನಿಕರಿಗೆ ನೀಡಲಾಗುವ ಧ್ವಜಗಳ ಮೂಲಕ ಸಂಗ್ರವಾಗುವ ನಿಧಿಯು ಪೊಲೀಸ್ ಸಿಬ್ಬಂಧಿಗಳ ಮತ್ತು ಅವರ ಕುಟುಂಬಗಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಬಳಕೆಯಾಗುತ್ತದೆ. ಈಗ ಈ ನಿಧಿ ಸಂಗ್ರಹ ಪ್ರಕ್ರಿಯೆಯೂ ಡಿಜಿಟಲ್ ಪೇಮೆಂಟ್ (UPI / QR Code) ಮೂಲಕ ಪಾರದರ್ಶಕವಾಗಿ ನಡೆಯುತ್ತಿರುವುದು ಪೊಲೀಸ್ ಇಲಾಖೆಯ ತಾಂತ್ರಿಕ ಬೆಳವಣಿಗೆಗೆ ಹಿಡಿದ ಕನ್ನಡಿಯಾಗಿದೆ.
2.ತಂತ್ರಜ್ಞಾನದಿಂದ ಹೆಚ್ಚಿದ ಕಾರ್ಯದಕ್ಷತೆ :ಪೊಲೀಸ್ ಇಲಾಖೆಯ ದಕ್ಷತೆ ಇಂದು ಹತ್ತಿರದ ಪೊಲೀಸ್ ಠಾಣೆಗೆ ಸೀಮಿತವಾಗಿಲ್ಲ.# ಪೊಲೀಸ್ ಐಟಿ (Police IT):ಈ ಸಾಫ್ಟವೇರ್ ಮೂಲಕ ಅಪರಾಧಿಗಳ ದತ್ತಾoಶ ಕ್ಷಣಾರ್ಧದಲ್ಲಿ ಲಭ್ಯವಿದ್ದು ತನಿಖಾ ದತ್ತಾpಶ ಕ್ಷಣಾರ್ಧದಲ್ಲಿ ಲಭ್ಯವಿದ್ದು ತನಿಖಾ ದಕ್ಷತೆಯನ್ನು ದ್ವಿಗುಣಗೊಳಿಸಿದೆ. # ನಮ್ಮ 112 ( ERSS):ತಂತ್ರಜ್ಞಾನದ ನೆರವಿನಿಂದ ದೂರು ನೀಡಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ತಲುಪುವ ವ್ಯವಸ್ಥೆಯು ಸಾರ್ವಜನಿಕರಲ್ಲಿ ಸುರಕ್ಷತೆಯ ಭಾವ ಮೂಡಿಸಿದೆ.

3.ಸೈಬರ್ ಕ್ರೈಂ ತಡೆಗೆ ಡಿಜಿಟಲ್ ಅಸ್ತ್ರಗಳು : ತಂತ್ರಜ್ಞಾನದ ವೆಬ್ಸೈಟ್ ಓದುಗರಿಗೆ ತಿಳಿದಿರುವಂತೆ ಸೈಬರ್ ದಾಳಿಗಳು ಇಂದಿನ ದೊಡ್ಡ ಆತಂಕ ಎಂದು ಹೇಳಬಹುದು.# 1930 ಸಹಾಯವಾಣಿ::ಇದು ಕೇವಲ ನಂಬರ್ ಅಲ್ಲ,ಹಣಕಾಸು ವಂಚನೆ ಆದಾಗ ಬ್ಯಾಂಕುಗಳೊಂದಿಗೆ ಸಮನ್ವಯ ಸಾಧಿಸಿ ಹಣವನ್ನು ಮುಟ್ಟುಗೊಲು ಹಾಕಿಕೊಳ್ಳುವ ರಿಯಲ್- ಟೈಮ್ ಟೆಕ್ನಾಲಜಿ ವ್ಯವಸ್ಥೆಯಾಗಿದೆ. # CEN ಠಾಣೆಗಳು :ಅತ್ಯಾಧುನಿಕ ಡೇಟಾ ಪೋರೆನ್ಸಿಕ್ ಲ್ಯಾಬ್ಗಳನ್ನು ಹೊಂದಿರುವ ಈ ಠಾಣೆಗಳು ಜಾಗತಿಕ ಮಟ್ಟದ ಸೈಬರ್ ಅಪರಾಧಗಳನ್ನು ಪತ್ತೆಹಚ್ಚುವ ದಕ್ಷತೆ ಹೊಂದಿವೆ.
4.ಭವಿಷ್ಯದ ಸ್ಮಾರ್ಟ್ ಪೊಲೀಸಿಂಗ್ :ಕೃತಕ ಬುದ್ದಿಮತ್ತೆ (AI), ಫೇಶಿಯಲ್ ರೆಕಗ್ನಿಷನ್ ಮತ್ತು ಡ್ರೋನ್ ಸರ್ವಯ್ಯಲೆನ್ಸ್ ಮುಂತಾದ ತಂತ್ರಜ್ಞಾನಗಳು ಪೊಲೀಸರಿಗೆ ಮೂರನೇ ಕಣ್ಣು ಆಗಿ ಕೆಲಸ ಮಾಡುತ್ತಿವೆ. ತಂತ್ರಜ್ಞಾನದ ಬಳಕೆಯಿಂದ ಮಾನವ ಹಸ್ತಕ್ಷೇಪ ಕಡಿಮೆಯಾಗಿ, ನ್ಯಾಯ ಒದಗಿಸುವಲ್ಲಿ ನಿಖರತೆ ಮತ್ತು ವೇಗ ಹೆಚ್ಚಾಗಿದೆ ಎಂದು ಹೇಳಬಹುದು.
ಉಪಸಂಹಾರ:ಪೊಲೀಸ್ ಧ್ವಜ ದಿನವು ಇಲಾಖೆಯ ಶೌರ್ಯಕ್ಕೆ ಸಾಕ್ಷಿಯಾದರೆ, ತಂತ್ರಜ್ಞಾನವು ಆ ಶೌರ್ಯಕ್ಕೆ ಬಲ ನೀಡಿದೆ. ಶಿಸ್ತುಬದ್ದ ದಕ್ಷತೆ ಮತ್ತು ಆಧುನಿಕ ತಂತ್ರಜ್ಞಾನದ ಈ ಸಂಗಮವು ನಮ್ಮ ಸಮಾಜವನ್ನು ಡಿಜಿಟಲ್ ಜಗತ್ತಿನಲ್ಲಿ ಸುರಕ್ಷಿತವಾಗಿರಿಸಿದೆ.
“ಈ ಲೇಖನ ನಿಮಗೆ ಇಷ್ಟವಾದ್ರೆ ಶೇರ್ ಮಾಡಿ, ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ನಲ್ಲಿ ತಿಳಿಸಿ. ಧನ್ಯವಾದಗಳು.”
