“ಸೆನ್ಸಸ್ 2026: ಹೈಟೆಕ್ ಆದ ಭಾರತದ ಜನಗಣತಿ – ನಾವೂ ಡಿಜಿಟಲ್ ಆಗೋಣ!”

ಪೀಠಿಕೆ :ನಮ್ಮ ದೇಶದಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜನರ ಎಣಿಕೆ ನಡೆಯುತ್ತದೆ. ಇದನ್ನು ನಾವು ‘ಜನಗಣತಿ’ಎನ್ನುತ್ತಾರೆ. ಆದರೆ ಈ ಬಾರಿ ಒಂದು ವಿಶೇಷ ಬದಲಾವಣೆ ಇದೆ. ಈ ಸಲ ಗಣತಿ ಮಾಡಲು ಪೆನ್ನು -ಪೇಪರ್ ಬಳಸುತ್ತಿಲ್ಲ.ಬದಲಿಗೆ ಎಲ್ಲವೂ ಡಿಜಿಟಲ್ ಆಗಿದೆ! ತಂತ್ರಜ್ಞಾನ ಬೆಳೆದಂತೆ ಜನಗಣತಿ ಕೆಲಸ ಹೇಗೆ ಸುಲಭವಾಗಿದೆ ಎಂದು ತಿಳಿಯೋಣ.

1.ನಿಮ್ಮ ಮೊಬೈಲ್ನಲ್ಲೇ ಮಾಹಿತಿ ತುಂಬಿ: ಈಗ ನೀವು ಗಣತಿದಾರರು ಮನೆಗೆ ಬರುವವರೆಗೆ ಕಾಯಬೇಕಿಲ್ಲ.ನಿಮ್ಮ ಸ್ಮಾರ್ಟ್ ಫೋನ್ ಬಳಸಿ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಹೋಗಿ, ನಿಮ್ಮ ಕುಟುಂಬದ ವಿವರಗಳನ್ನು ನೀವೇ ಸುಲಭವಾಗಿ ಧಾಖಲಿಸಬಹುದು. ಇದು ಬ್ಯಾಂಕ್ನಲ್ಲಿ ಅಕೌಂಟ್ ತೆರೆದಷ್ಟೇ ಸುಲಭ ಎಂದು ಹೇಳಬಹುದು.

2.ಗಣತಿದಾರರ ಕೈಯಲ್ಲಿ ಈಗ ಮೊಬೈಲ್ ಆಪ್ (App):ಒಂದು ವೇಳೆ ನೀವು ಆನ್ಲೈನ್ನಲ್ಲಿ ಮಾಹಿತಿ ತುಂಬದಿದ್ದರೆ, ಅಧಿಕಾರಿಗಳೇ ನಿಮ್ಮ ಮನೆಗೆ ಬರುತ್ತಾರೆ. ಆದರೆ ಈ ಬಾರಿ ಅವರು ದೊಡ್ಡ ದೊಡ್ಡ ಪುಸ್ತಕಗಳನ್ನು ತರುವುದಿಲ್ಲ. ಅವರ ಕೈಯಲ್ಲಿ ಒಂದು ಮೊಬೈಲ್ ಅಥವಾ ಟ್ಯಾಬ್ಲೆಟ್ ಇರುತ್ತದೆ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರೆ, ಅವರು ತಕ್ಷಣವೇ ಅಪ್ (App)ನಲ್ಲಿ ಆ ಮಾಹಿತಿಯನ್ನು ಸೇರಿಸುತ್ತಾರೆ.

3.ನಿಮ್ಮ ಮಾಹಿತಿ ತುಂಬಾ ಸುರಕ್ಷಿತ : “ನಾವು ಕೊಡುವ ಮಾಹಿತಿಯು ಬೇರೆಯವರಿಗೆ ಗೊತ್ತಾಗುತ್ತಾ?”ಎಂದು ಭಯಾಪಡುವ ಅವಶ್ಯಕತೆ ಇಲ್ಲಾ. ನೀವು ನೀಡುವ ಪ್ರತಿಯೊಂದು ಮಾಹಿತಿಯು ಸರ್ಕಾರಿ ಕಂಪ್ಯೂಟರ್ ನಲ್ಲಿ ಅತ್ಯಂತ ರಹಸ್ಯವಾಗಿ ಮತ್ತು ಸುರಕ್ಷಿತವಾಗಿರುತ್ತದೆ. ಇದನ್ನು ಬೇರೆ ಯಾರೂ ನೋಡಲು ಸಾಧ್ಯವಿಲ್ಲ.

4.ಕೆಲಸ ಬೇಗ ಮುಗಿಯುತ್ತದೆ: ಹಿಂದೆಲ್ಲಾ ಜನಸಂಖ್ಯೆ ಎಣಿಕೆ ಮಾಡಿ, ಅದರ ರಿಸಲ್ಟ್ ತಿಳಿಯಲು ವರ್ಷಗಳೇ ಬೇಕಾಗುತ್ತಿತ್ತು. ಈಗ ಎಲ್ಲವೂ ಡಿಜಿಟಲ್ ಆಗಿರುವುದರಿಂದ, ಮಾಹಿತಿ ಸಂಗ್ರಹವಾದ ಕೆಲವೇ ದಿನಗಳಲ್ಲಿ ದೇಶದಲ್ಲಿ ಎಷ್ಟು ಜನರಿದ್ದಾರೆ ಎಂಬುದು ತಿಳಿಯುತ್ತದೆ.ಇದರಿಂದ ಜನರಿಗೆ ಬೇಕಾದ ಸೌಲಭ್ಯಗಳನ್ನು ಸರ್ಕಾರ ಬೇಗನೆ ಒದಗಿಸಲು ಸಾದ್ಯವಾಗುತ್ತದೆ.

5.ನಾವೂ ಸಹಕರಿಸೋಣ :ನಮ್ಮ ದೇಶದ ಪ್ರಗತಿಗಾಗಿ ಈ ಎಣಿಕೆ ತುಂಬಾ ಮುಖ್ಯವಾಗಿದೆ. ನಾವೂ ಕೂಡ ತಂತ್ರಜ್ಞಾನವನ್ನು ಬಳಸಿ, ಸರಿಯಾದ ಮಾಹಿತಿ ನೀಡಿ ಈ ಜನಗಣತಿ ಕೆಲಸಕ್ಕೆ ಸಹಾಯ ಮಾಡೋಣ.

ಉಪಸಂಹಾರ :ಇಂದಿನ ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವೂ ಬದಲಾಗೋಣ.ಈ ಬಾರಿ ನಾವು ಡಿಜಿಟಲ್ ಆಗಿ ಜನಗಣತಿಯಲ್ಲಿ ಭಾಗವಹಿಸೋಣ.

“”ಈ ಲೇಖನ ನಿಮಗೆ ಇಷ್ಟವಾದ್ರೆ ಶೇರ್ ಮಾಡಿ, ತಮ್ಮ ಅಭಿಪ್ರಾಯವನ್ನು ಕಾಮೆಂಟ್ಸ್ನಲ್ಲಿ ತಿಳಿಸಿ. ಧನ್ಯವಾದಗಳು.”

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ