” ರೈತರ ಪಂಪ್ಸೆಟ್ಗಳಿಗೆ ‘ಸಾಫ್ಟ್ ಸ್ಟಾರ್ಟರ್’: ಮೋಟಾರ್ ಆಯಸ್ಸು ಹೆಚ್ಚಿಸುವ ರಕ್ಷಣಾ ಕವಚ!”

ಪೀಠಿಕೆ :ರೈತರು ದೇಶದ ಬೆನ್ನೆಲುಬು ಮತ್ತು ನಿಜವಾದ ಅನ್ನದಾತರು.ಅದಕ್ಕಾಗಿಯೇ ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 3ರಂದು “ರಾಷ್ಟ್ರೀಯ ರೈತರ ದಿನ”ಆಚರಿಸಲಾಗುತ್ತದೆ. ರೈತರ ಬದುಕಿನಲ್ಲಿ ನೀರಾವರಿ ಎನ್ನುವದು ಜೀವನಾಡಿ ಇದ್ದಂತೆ. ಹಗಲಿರುಳು ಕಷ್ಟಪಟ್ಟು ಬೆಳೆ ಬೆಳೆಯುವ ರೈತನಿಗೆ ಬೋರ್ವೇಲ್ ಅಥವಾ ಬಾವಿಯ ಮೋಟಾರ್ ಕೈಕೊಟ್ಟರೆ ಇಡೀ ಬೆಳೆ ಒಣಗುವ ಭೀತಿ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಮೋಟಾರ್ಗಳನ್ನು ವಿದ್ಯುತ್ ಏರಿಳಿತ ಮತ್ತು ಯಾಂತ್ರಿಕ ಹಾನಿಯಿಂದ ರಕ್ಷಿಸಲು ಇರುವ ಅತ್ತ್ಯುತ್ತಮ ತಂತ್ರಜ್ಞಾನವೇ ಸಾಫ್ಟ್ ಸ್ಟಾರ್ಟರ್ ಎಂದು ಹೇಳಬಹುದು.

1.ಮೃದುವಾದ ಆರಂಭ ದೀರ್ಘಕಾಲದ ಬಾಳಿಕೆ. ನಮ್ಮ ಹಳೆಯ ಸ್ಟಾರ್ಟರ್ಗಳು ಮೋಟಾರ್ ಆನ್ ಮಾಡಿದ ಕೂಡಲೇ ಒಮ್ಮೆಲೇ ಅತೀ ಹೆಚ್ಚಿನ ವಿದ್ಯುತ್ ನ್ನು ಹರಿಸುತ್ತವೆ. ಇದು ಮೋಟಾರ್ ಒಳಗೆ ಒಂದು ರೀತಿಯ ‘ಶಾಕ್’ ಉಂಟುಮಾಡುತ್ತದೆ. ಆದರೆ ಸಾಫ್ಟ್ ಸ್ಟಾರ್ಟರ್ ಹೆಸರೇ ಸೂಚಿಸುವಂತೆ ಮೋಟಾರ್ಗೆ ವಿದ್ಯುತ್ ನ್ನು ಹಂತಹಂತವಾಗಿ ನೀಡಿ ಅತ್ಯಂತ ಮೃದುವಾಗಿ ಚಾಲನೆ ನೀಡುತ್ತದೆ. ಇದರಿಂದ ಮೋಟಾರ್ ಕೊಯಲ್ ಮೇಲೆ ಒತ್ತಡ ಬೀಳದೆ ಅದರ ಜೀವಿತಾವಧಿ ಹೆಚ್ಚುತ್ತದೆ.

2.ವಿದ್ಯುತ್ ಏರಿಳಿತಕ್ಕೆ ಅಡ್ಡಗೋಡೆ : ಗ್ರಾಮೀಣ ಪ್ರದೇಶಗಳಲ್ಲಿ ಲೋ -ವೋಲ್ಟೇಜ್ ಅಥವಾ ಹೈ -ವೋಲ್ಟೇಜ್ ಸಮಸ್ಯೆ ಸಾಮಾನ್ಯವಾಗಿ ಇದ್ದೇ ಇರುತ್ತದೆ.ಸಾಫ್ಟ್ ಸ್ಟಾರ್ಟರ್ಗಳು ಇಂತಹ ಏರಿಳಿತಗಳನ್ನು ತಡೆದು ಮೋಟಾರ್ ಸುಟ್ಟು ಹೋಗದಂತೆ ರಕ್ಷಿಸುತ್ತದೆ.ಅಲ್ಲದೇ ಪಂಪ್ ಚಾಲನೆಯದಾಗ ಪೈಪ್ಗಳಲ್ಲಿ ಉಂಟಾಗುವ ನೀರಿನ ಹಠಾತ್ ಒತ್ತಡವನ್ನು ನಿಯಂತ್ರಿಸಿ ಪೈಪ್ ಒಡೆಯದಂತೆ ನೋಡಿಕೊಳ್ಳುತ್ತದೆ.

3.ಆಧುನಿಕ ರೈತನಿಗೆ ಸ್ಮಾರ್ಟ್ ಸೌಲಭ್ಯಗಳು : ಇಂದಿನ ಸಾಫ್ಟ್ ಸ್ಟಾರ್ಟರ್ಗಳು ಕೇವಲ ಸ್ವಿಚ್ ಗಳಲ್ಲ, ಅವು ಬುದ್ದಿವಂತ ಸಾಧನಗಳಾಗಿವೆ.ಡ್ರೈರನ್ ಪ್ರೊಟೆಕ್ಷನ್ :ಬೊರ್ವೇಲ್ಗಳಲ್ಲಿ ನೀರು ಖಾಲಿಯಾದಾಗ ಮೋಟಾರ್ ತಾನಾಗಿಯೇ ಆಫ್ ಆಗುತ್ತದೆ.ಮೊಬೈಲ್ ಕಂಟ್ರೋಲ್ :ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಮೋಟಾರ್ ಚಾಲನೆ ಮಾಡುವ ಸೌಲಭ್ಯ ರೈತನ ಶ್ರಮವನ್ನು ಕಡಿಮೆ ಮಾಡುತ್ತದೆ.ಆಟೋ ಸ್ಟಾರ್ಟ್ :ಕರೆಂಟ್ ಬಂದ್ ತಕ್ಷಣ ಪಂಪ್ ತಾನಾಗಿಯೇ ಕಾರ್ಯಾರಂಭ ಮಾಡುತ್ತದೆ.

4.ಇದು ಹೂಡಿಕೆಯೇ ಹೊರತು ವೆಚ್ಚವಲ್ಲ:ಹಲವು ರೈತರು ಸಾಫ್ಟ್ ಸ್ಟಾರ್ಟರ್ ನ ಬೆಲೆ ಸ್ವಲ್ಪ ಹೆಚ್ಚು ಎಂದು ಭಾವಿಸಬಹುದು.ಆದರೆ ಮೋಟಾರ್ ಒಮ್ಮೆ ಸುಟ್ಟು ಹೋದರೆ ಅದನ್ನು ರಿಪೇರಿ ಮಾಡಿಸಲು ತಗಲುವ ವೆಚ್ಚ ಮತ್ತು ಆ ಸಮಯದಲ್ಲಿ ಬೆಳೆಗಾಗುವ ಹಾನಿಯನ್ನು ಲೆಕ್ಕ ಹಾಕಿದರೆ ಸಾಫ್ಟ್ ಸ್ಟಾರ್ಟರ್ ಅಳವಡಿಸುವುದು ಅತ್ಯಂತ ಲಾಭದಾಯಕ ಎಂದು ಹೇಳಬಹುದು.

ಉಪಸಂಹಾರ:ತಂತ್ರಜ್ಞಾನವು ಕೃಷಿಯೊಂದಿಗೆ ಬೆರೆತಾಗ ರೈತನ ಬದುಕು ಹಸನಾಗುತ್ತದೆ.ಸಾಫ್ಟ್ ಸ್ಟಾರ್ಟರ್ ಕೇವಲ ಒಂದು ಯಂತ್ರವಲ್ಲ, ಅದು ರೈತನ ಬೆಳೆ ಮತ್ತು ಬೆವರಿನ ಶ್ರಮಕ್ಕೆ ನೀಡುವ ಭದ್ರತೆಯಾಗಿದೆ. ನೀವು ನಿಮ್ಮ ಪಂಪ್ಸೆಟ್ಗೆ ಒಂದು ಸಾಫ್ಟ್ ಸ್ಟಾರ್ಟರ್ ಅಳವಡಿಸಿ ಆತಂಕವಿಲ್ಲದೆ ಕೃಷಿ ಮಾಡಿರಿ.

“ಈ ಲೇಖನ ನಿಮಗೆ ಇಷ್ಟವಾದ್ರೆ ಶೇರ್ ಮಾಡಿ,ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ನಲ್ಲಿ ತಿಳಿಸಿ. ಧನ್ಯವಾದಗಳು. “

3 thoughts on “” ರೈತರ ಪಂಪ್ಸೆಟ್ಗಳಿಗೆ ‘ಸಾಫ್ಟ್ ಸ್ಟಾರ್ಟರ್’: ಮೋಟಾರ್ ಆಯಸ್ಸು ಹೆಚ್ಚಿಸುವ ರಕ್ಷಣಾ ಕವಚ!””

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ